ಒಂದು ಸಣ್ಣ ಸಾಂತ್ವನ!
ಅದೇನೋ ಗೊತ್ತಿಲ್ಲ ಎಲ್ಲಾ ಮರಿತಿನಿ,
ನೀನು ಜೊತೆಗಿದ್ದ ಪ್ರತಿ ಸಮಯ!
ನನ್ನೆ ನಾನು ನಿನಗೇ ಅರ್ಪಿಸಿದಿನಿ ಅನ್ನೋ ಭಾವನೆ,
ಪ್ರತಿಕ್ಷಣ ನಿನಗಾಗಿ ಹಂಬಲಿಸಿ ಹೋದಂತೆ ನನ್ನ ಹೃದಯ!
ಕಾರಣ ವಿಲ್ಲದ ಪ್ರೀತಿ ಶುರುವಾಯ್ತು ಹೇಗೋ,
ನೀನಿರು ಜೊತೆಯಲಿ ಸಾಕು ಬೇರೇನು ಬೇಕಿಲ್ಲ!
ನನ್ನ ಕೋಪದಲ್ಲು ನಿನ್ನ ಅಪ್ಪುಗೆ ಸಮಾಧಾನ ಪಡಿಸುತ್ತೆ,
ನಿನ್ನ ಪ್ರೀತಿಯೆ ಸಾಕು ನನಗೆ ಬೇರೆ ಆಸೆ ಕನಸಿಲ್ಲ!
ಆಗಿಹೋಗಿರುವೆ ನೀನು ನನ್ನ ಮನಸಿನ ಜೋತೆ,
ಎರಡು ಜೀವ ಒಂದೇ ಮನಸಿನಂತೆ!
ಉಸಿರಂತೆ ನೀನು ಸಂಪೂರ್ಣ ಆವರಿಸಿದೆ ನನ್ನ,
ನಿನ್ನ ಪ್ರತಿಮಾತು ಕೂಡ ಮನಸಿಗೆ, ಒಂದು ಸಣ್ಣ ಸಾಂತ್ವನ!
- ಪ್ರದೀ...
Comments
Post a Comment