ಬದುಕಸುಂದರ ಗೊಳಿಸಿದೆ ನೀನು...
ಬದುಕ ಸುಂದರ ಗೊಳಿಸಿದೆ ನೀನು,
ನಿನ್ನ ಒಲುಮೆಗೆ ಕೈ ವಶವಾದೆ ನಾನು,
ಹೇಗೆ ಹೂಡಿದೆ ನನ್ನ ಮನಸೊಳಗೆ ನೀನು,
ಬಿಟ್ಟು ಇರೋಕಾಗಲ್ಲ ಈಗ ಒಂದುಕ್ಷಣ ನಿನ್ನ ನಾನು!
ನಿನ್ನ ನೋಡುತ ಈಗೆ ಕೂತು ಬಿಡುವೆ ದಿನವೆಲ್ಲ,
ನಿನ್ನ ಕಂಡು ನನ್ನೊಳಗೆ ಮೂಡುವ ಆಸೆಗೆ ಕೊನೆಯಿಲ್ಲ,
ಎಲ್ಲ ಉನ್ಮಾದದ ಭಾವನೆಗಳು ಬಲು ಮೋಹಕ,
ನಿನ್ನ ನೆನೆದು ನನ್ನೆ ಮರೆತು ಹೋಗುವ, ದಿನಚರಿಯ ಕಾಯಕ!
ನನ್ನ ಮನಸೊಳಗೆ ನೀನು ನಿಂದೆ ಯೋಚನೆ,
ದವಂತಿಸುವ ಪ್ರೇಮ ಉಸಿರಾಗಿ ಬೇರೆತಿರುವಾಗ ನೀನೆ,
ನಿನ್ನ ಸಣ್ಣ ಕೈ ಸ್ಪರ್ಶ ಬೇರೊಂದು ಸುಖ ಮನದೆಡೆಗೆ,
ಕಣ್ಮುಚ್ಚಿ ತೆರೆದಂತೆ ದಿನ ಬೇಟಿಯಾಗುವೆ ನೀನೇ ನನ್ನ ಕನಸೊಳಗೆ!
- ಪ್ರದೀ...
Comments
Post a Comment