ಕೊಲ್ಲುವ ಕಣ್ಣುಗಳು...

ಮನಸೊಳಗೆ ಬಂದೆ ಕೇಳದೆ ನನ್ನ,
ಉಸಿರಂತೆ ಆವರಿಸಿದೆ ಸಂಪೂರ್ಣ ನನ್ನ,
ಮಾಡುತ್ತಿದೆ ಮನಸು ಬರಿ ಈಗ ನಿನ್ನ ಧ್ಯಾನ,
ಎದುರು ಬಂದಾಗ ನೀನು ಅದೇಕೋ ಅದೇ ಮೌನ!

ಸೋತೆ ನಾನು ಕಂಡು ನಿನ್ನ ಕೊಲ್ಲುವ ಕಣ್ಣುಗಳನ್ನ,
ನಿನ್ನ ಒಲುಮೆಯಲಿ ಕಳೆದೋಗುವ ಆಸೆ ಚಿನ್ನ,
ಎದುರು ಕೂರು ನಿನ್ನೆ ನೋಡುತ ಕಳೆದುಬಿಡುವೆ ದಿನವನ್ನ,
ಬಾ ಆಹ್ವಾನಿಸು ಆಗಲಿ ತುಟಿ ತುಟಿಗಳ ಸಮ್ಮಿಲನ!

ತುಸು ಪೋಲಿ ಆದೆ ಒಲವೇ ನಿನ್ನೀ ಪ್ರೀತಿಯಲಿ,
ನೀನೇ ಕಾಡುವೆ ಪ್ರತಿರಾತ್ರಿ ಬೀಳುವ ಕನಸಲಿ,
ನೀನು ಜೊತೆಗಿದ್ದಾಗ ಯಾಕೋ ಸಾಲದು ಸಮಯ,
ಮುಡಿಪಾಯ್ತು ಕಣೇ ನಿನಗೆ ನನ್ನ ಪುಟ್ಟ ಹೃದಯ!

- ಪ್ರದೀ...


Comments

Popular Posts