ಒಲವ ವೇದನೆ 🖤

ಒ ಮನಸೇ ನಿನ್ನ ನೆನಪೇ ಪ್ರತಿಕ್ಷಣ,
ಅದೇನೋ ಹುಚ್ಚು ಮನಕೆ ನಿಂದೆ ಧ್ಯಾನ,
ನಿನ್ನಯ ನೆನಪಲಿ ಅದೇ ನಾ ಮೌನ,
ಮನಸ್ತುಂಬ ಆವರಿಸಿದೆ ನೀ ನನ್ನ!

ಕನಸಲ್ಲೂ ಸಹ ನಿನ್ನೇಸರ ಚಟಪಡಿಕೆ,
ನಿನ್ನೆ ನೋಡಲು ಹಂಬಲ ಈ ಮನಕೆ,
ಗಾಢವಾದ ಪ್ರೇಮ ನಿನ್ನೊಲವನು ಬಯಸಿದೆ,
ಹೃದಯಕ್ಕೆ ಹತ್ತಿರ ನಿನ್ನ ನೆನಪೊಂದೇ ಕಾಡಿದೆ!

ನಿನ್ನ ಅರಿಯುವ ಪ್ರಯತ್ನದಲ್ಲಿ ಇನ್ನು ಇದ್ದೇನೆ,
ತುಂಬಾ ಸತಾಯಿಸಬೇಡ ನಿನಗಾಗಿ ಇನ್ನು ಕಾಯುತ್ತಿದ್ದೇನೆ,
ಓಲವಿನಲ್ಲಿ ಕಳೆದೋಗಿದೆ ಮನ ನಿನ್ನ ಬಯಸುತ,
ಸಿಗುವೆಯಾ ನೀನು ಬರುವೆ ನಿನ್ನ ಹುಡುಕುತ!

ಯಾರು ಅರಿತವರು ಪ್ರೀತಿಯಾ ಅಂತರಾಳವ,
ಮನಸಿನಲಿ ಚಿಗುರಿ ಒಲವು ಬೇರೂರಿದೆ ಮನವ,
ಪ್ರೀತಿಸಿದವರನ್ನ ಮರೆಯೋದು ಕಷ್ಟ ಮರೆಯಲಾಗದು,
ಸಿಗದ ಕಾರಣ ಮನಸೇ ಕೊರಗುವ ಶಿಕ್ಷೆ, ತಾನೇ ಅನುಭವಿಸೋದು! 

- ಪ್ರದೀ...


Comments

Popular Posts