ಈಗೇಕೆ ನೀ ಕಾಡುವೆ!
ಮನಸಿನ ಮನದೊಳಗೆ ಉಳಿದೆ ನೀ,
ಪ್ರೀತಿಯೆ ನೀಡಿ ದೂರಾದೆ ಏಕೆ ನೀ,
ನಿನದೇ ತವಕ ನಿಬರುವ ಹಾದಿಯಲಿ,
ನೆನಪಂತೆ ಉಳಿದೆ ನೀ ಇಂದು ಮನಸಲಿ!
ಒಲವೆಂಬ ಪರಿಚಯ ಮಾಡಿಕೊಡುವ,
ಅರಿಯದೆ ಈ ಮನವು ನಿನ್ನೆ ಪ್ರೀತಿಸುವ,
ಕನಸಲಿ ನೀ ಆದೇ ಹತ್ತಿರ ಇರುವಹಾಗೇ ಸನಿಹ,
ಹುಚ್ಚು ಪ್ರೀತಿ ಮಾಡಿದೆ ನಿನ್ನೆ ನೆನೆದೆ ಪುನಹ ಪುನಹ!
ಬೇರೇನು ಬೇಡ ಇಂದು ನನಗೆ,
ಅರಿಯದೆ ನೀ ಹೂಡಿದೆ ಮನಸೊಳಗೆ,
ಈಗೇಕೆ ನೀ ಕಾಯಿಸೋದು ಮನಸನ್ನ,
ದೂರಾಗಿ ಕೊಳ್ಳದಿರು ಈ ಪುಟ್ಟ ಹೃದಯವನ್ನ!
- ಪ್ರದೀಪ್. ಎಸ್ ( ಪ್ರದೀ... )
Comments
Post a Comment