" ಪ್ರೀತಿ " ❤️
ಅಂದು ಮುಂಜಾನೆ ಸಮಯ ಆರು ಗಂಟೆ ಆಗಿತ್ತು, ನಾನು ಎಂದಿನಂತೆ ಪಾರ್ಕ್ ಗೆ ಹೊರಟೆ, ಆದರೆ ಅವಳೊಬ್ಬಳು ಕಂಡಳು ಈ ಕಣ್ಣಿಗೆ, ಎಂದು ನಾ ಅವಳನ್ನು ನೋಡಿರಲಿಲ್ಲ, ಅವಳ ಕಣ್ಣುಗಳು ಮನಸನ್ನೇ ಆಕರ್ಷಿಸಿತು, ಈಗೆ ಒಂದೆರಡು ವಾರ ಕಳೆಯಿತು...
ಅವತೊಂದಿನ ಇದ್ದಕಿದ್ದಂತೆ ನಾ ಕುಳಿತಿದ್ದ ಚೇರಿನ ಬಳಿ ಬಂದು " ಐ " ಎಂದು ಮಾತನಾಡಿದಳು, ನಾನು ಸಂಕೋಚದಿಂದ " ಐ " ಎಂದೇ, ಅವಳು ಹಾಗೆ ಕೇಳಿದಳು ನಿಮ್ಮ ಹೆಸರು ಎಂದು, ನಾನು ದೀಪು ಎಂದು ಹೇಳಿ ಸುಮ್ಮನಾದೆ, ಹಾಗೆ ನಾನು ಸಂಕೋಚದಿಂದ ನಿಮ್ಮ ಹೆಸರು ಏನೆಂದು ಕೇಳಿದೆ, ಅವಳು ಕೂಡ ನನ್ನ ಹೆಸರು ದೀಪ್ತಿ ಎಂದು ಹೇಳಿ ಹಾಗೆ ನಕ್ಕು ಹೊರಟಳು... ನಾನು ಅವಳ ಗುಂಗಲೇ ನಾನು ಹೊರಟೆ...
ಈಗೆ ಒಂದೆರಡು ವಾರ ಕಳೆಯಿತು, ಅವಳ ಪರಿಚಯ ಸ್ನೇಹವಾಗಿತ್ತು! ಅವಳು ಕೂಡ ದಿನ ಮುಂಜಾನೆ ಪಾರ್ಕ್ ಗೆ ಬರುತ್ತಿದ್ದಳು, ನಾ ಅವಳನ್ನು ನೋಡಿದಾಗೆಲ್ಲ ಹಾಗೆ ನಗುವ ಮೋಕವ ತೋರಿ ಹೋಗುತ್ತಿದ್ದಳು! ಈಗೆ ಒಂದಿನ ಅವಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಅವಳ ಪ್ರೊಫೈಲ್ ನೋಡಿದೆ ಹಾಗೆ ಫ್ರೆಂಡ್ ರಿಕ್ವೆಸ್ಟ್ ಕಲಿಸಿದೆ ಅವಳು ಅದನ್ನು accept ಮಾಡಿದ್ದಲ್ಲು... ಆದರೆ ಅವಳಿಗೆ ಮೆಸೇಜ್ ಕಲಿಸಿಲ್ಲ ನಾನು, ಆದರೆ ಅದೊಂದು ದಿನ ಅವಳ ಕಡೆಯಿಂದ ಮೆಸೇಜ್ ಬಂದಿತ್ತು! ( ಐ ನಾಳೆ ಸಿಗೋಣ ಅಂತ ಮೆಸೇಜ್ ಮಾಡಿದ್ದಳು, ನಾನು ಹೇಗಿದ್ದರೂ ನಾಳೆ ಮೋರ್ನಿಗ್ ಪಾರ್ಕ್ ಗೆ ಬರ್ತಿಯೆಲ್ಲ ಅಲ್ಲೇ ಸಿಗೋಣ ಅಂದೆ, ಅವಳು ಕೂಡ ಸರಿ ಎಂದು ಹೇಳಿದಳು ) ಸಂದೇಶ ನೋಡಿ ಮನಸಿಗೆ ಖುಷಿ ಆಯ್ತು...
ಆದರೆ ಇಲ್ಲಿ ಅವಳ ಮೇಲೆ ಇದ್ದ ಭಾವನೆ, ಸ್ನೇಹದಿಂದ ಪ್ರೀತಿಗೆ ಆಗಲೇ ಪರಿವರ್ತಿಸಿತ್ತು, ನನಗು ಅರಿಯದೆ ಅವಳನ್ನು ಕಂಡರೆ ಪ್ರೀತಿ,... ಹಾಗೆ ಅವಳು ಹೇಳಿದಂತೆ ಅಂದು ಮುಂಜಾನೆ ಪಾರ್ಕ್ ಗೆ ಹೊರಟೆ ಅವಳು ಸಿಕ್ಕಲು, ಈಗೆ ಇಬ್ಬರು ಮಾತನಾಡುತ್ತಾ ವಾಕಿಂಗ್ ಮಾಡುತ್ತಿದ್ದವಿ, ಹಾಗೆ ನಾ ಕೇಳಿದೆ ಏನ್ ಮಾಡ್ತಿದಿರ ಅಂತ ಹಾಗ ಹೇಳಿದಳು ಬೀ.ಕಾಮ್ ಮುಗಿತು ಜಾಬ್ ಸರ್ಚ್ ಮಾಡ್ತಾ ಇದೀನಿ ಅಂತ ಹೇಳಿದಳು, ಹಾಗೆ ನನ್ನು ಕೇಳಿದಳು, ನಾನು ಹೇಳಿದೆ ಎಂಜಿನಿಯರಿಂಗ್ ಮುಗಿಸಿ ಕೆಲ್ಸ ಸೇರಿದಿನಿ ಈಗಷ್ಟೆ ಆರು ತಿಂಗಳು ಆಯಿತು ಎಂದು ಹೇಳಿದೆ...
ಆದರೆ ನಾವು ವಿಷಯವನ್ನೆ ಮರೆತು ಹೋಗಿದ್ದೆವು, ನಂತರ ನಾನೇ ಕೇಳಿದೆ, ಹೇಳಿ ಏನ್ ವಿಷಯ ಸಿಗೋಣ ಅಂದ್ರಲ್ಲ ಅಂದೆ, ಅದಕೆ ಏನು ಇಲ್ಲ ಸುಮ್ಮನೆ ಅಂದೆ ಎಂದು ಸುಮ್ಮನಾದಳು, ನಾನು ಏನು ಹೇಳದೇನೆ ಸುಮ್ಮನಾದೆ... ಆದರೆ ಅವಳ ಪ್ರತಿ ಮೌನದ ಹಿಂದೆ ಏನೋ ಮಾತು ಅಡಗಿದೆ ಅನ್ನಿಸಿತು ನನಗೆ... ಹಾಗೆ ಅವಳು ಸರಿ ನಾಳೆ ಸಿಗೋಣ ಎಂದು ಹೇಳಿ ಹೊರಟಳು ಹಾಗ ಸಮಯ ಬೆಳಗೆ ಏಳು ವರೆ ಆಗಿತ್ತು! ನಾನು ಕೂಡ ಹೊರಟೆ....
ಈಗೆ ಒಂದೆರಡು ತಿಂಗಳು ಕಳೆಯಿತು ಇಬ್ಬರ ನಡುವೆ ಒಂದು ಸ್ನೇಹದ ಬಾಂಧವ್ಯ ಗಟ್ಟಿಯಾಗಿತ್ತು... ಈ ಸ್ನೇಹ ಹೇಗಿತ್ತು ಎಂದರೆ ಹೋಗ ಬಾರೋ ಸ್ನೇಹವಾಗಿತ್ತು...
ನಾನು ನನ್ನ ಹಾಗೆಯೆ ಅವಳು ನನ್ನ ಮೇಲೆ ಆದೇ ಭಾವನೆ ಇದೆಯಾ ಇಲ್ಲವಾ ಎಂದು ಯೋಚಿಸುತ್ತಿದ್ದೆ, ಹಾಗೆ ಒಂದು ದಿನ ತಿಳಿಯಿತು ಅವಳು ಕೂಡ ನನ್ನ ಹಾಗೆ ಇಷ್ಟ ಪಡುತ್ತಿರುವ ವಿಷಯ ತಿಳಿದು ಬಂದಿತ್ತು....
ಈಗೆ ದಿನಗಳು ಕಳೆದವು.... ನನ್ನ ಮನಸಿನ ಭಾವನೆಗಳನ್ನು ತಿಳಿಸಿ ಬಿಡೋಣ ಅಂದು ಕೊಂಡೆ... ಆದರೆ ಅವಳು ಪ್ರತಿ ಬಾರಿ ಎದುರು ಬಂದಾಗ ನನ್ನೆ ನಾ ಮರೆತು ಮಾತು ಕೂಡ ಮೌನ ಬಯಸುತಿತ್ತು ಮನಸು.... ಹೇಗೋ ಅವಳ ಮನೆ ವಿಳಾಸ ತಿಳಿದಿತ್ತು, ಹಾಗೆ ಅವತು ನನ್ನ ಹತ್ತಿರ ಇದ್ದ ಪಲ್ಸರ್ ಬೈಕ್ ಹತ್ತಿ ಅವಳ ಮನೆ ಕಡೆ ಹೊರಟೆ, ಹಾಗ ಸಮಯ ಸಂಜೆ ೭ ಗಂಟೆ ಆಗಿತ್ತು... ಆ ಚಂದ್ರ ತನ್ನ ಬೆಳಕನ್ನು ಭೂಮಿಗೆ ಸ್ಪರ್ಶಿಸಿದ್ದ, ಆಕಡೆ ಇಂದ ಅರಿಯದೆ ಅವಳ ಆಗಮನ, ಮನಸಿಗೆ ಅರಿಯದೆ ಅವಳನ್ನೇ ನೋಡುತ್ತಾ ಜೆಲ್ ಎಂದಿತ್ತು ಹೃದಯ, ಅರಿಯದೆ ಅಸಮಯ....
ಅವಳು ಹೇಗೆ ಕಂಡಳು ಅಂದ್ರೆ ,
"ಆ ಚಂದ್ರನ ಬೆಳಕಿನಲ್ಲಿ ಮುಂಗುರುಳು ಸೇರೆಸುತ್ತ ಬಂದಳು,
ಅರಿಯದೆ ಈ ಹೃದಯವನ್ನ ಕದ್ದೋದಳು,
ಅವಳ ಕಣ್ಣುಗಳು ಹೊಳೆಯುತಿತ್ತು ನಕ್ಷತ್ರದಂತೆ,
ಇವಳ ಅಂದವ ಕಂಡು ಆ ಚಂದ್ರನು ನಾಚುತ್ತಿದ್ದನಂತೆ" , ...
ನಾನು ಅಲ್ಲೇ ಗಾಡಿನ ಸೈಡ್ಗೆ ನಿಲ್ಲಿಸಿ ಅಲ್ಲೇ ಹೋಗುತಿದ್ದ ನನ್ನ ಸ್ನೇಹಿತ ಚರಣ್ ಜೊತೆಗೆ ಮಾತನಾಡುತ ನಿಂತೆ, ಅವಳು ಅವಳ ಮನೆ ಬಾಗಿಲ ಬಳಿ ನಿಂತು ನನ್ನೆ ನೋಡಿದಳು , ಸಂಕೋಚದಿಂದ ನಾನು ಒಮ್ಮೆ ನೋಡಿ ಅಲ್ಲಿಂದ ಹೊರಟು ಹೋದೆ... ಅವಳು ನೋಡಿದ ಕ್ಷಣ ಅರಿಯದೆ ಈ ಹೃದಯ ಬಡಿತ ಕೂಡ ಹೆಚ್ಚಾಗಿತ್ತು, ಹೇಗೋ ಸಮಾಧಾನ ನಾನೇ ಮಾಡಿ ಕೊಂಡು... ನನ್ನ ಮನೆ ಹತ್ತಿರ ಗಾಡಿ ನಿಲ್ಲಿಸಿ ಮನೆ ಹೊಳಗೆ ಬಂದು ದಿವಾನ ಮೇಲೆ ಕುಳಿತುಕೊಂಡು...
ಅದಾದ ಸ್ವಲ್ಪ ಸಮಯ ನಂತರ ಅವಳು ಮೆಸೇಜ್ ಮಾಡಿದ್ದಳು, ಏನು ಇವತ್ತು ನಮ್ಮ ಮನೆ ಹತ್ತಿರ ಬಂದಿದ್ದೆ, ಎಂದು ಕಳಿಸಿದ್ದಳು, ನಾನು ಇಲ್ಲ ಹೀಗೆ ಸ್ನೇಹಿತ ಮನೆಗೆ ಹೋಗ್ತಿದ್ದೆ ಹಾಗೆ ಬಂದಿದ್ದೆ ಅಂದೆ, ಹೋ ಹೌದ ಎಂದು ಸುಮ್ಮನಾಗಿ ಹೀಗೆ ಒಂದಿಷ್ಟು ಮಾತು ಕಥೆ ನಡೆದಿತ್ತು...
ಎಂದಿನಂತೆ ಅಂದೂ ಮುಂಜಾನೆ ಪಾರ್ಕ್ ನಲ್ಲಿ ಸಿಕ್ಕಿದಳು, ಹೀಗೆ ಮಾತನಾಡುತ್ತ ಇಬ್ಬರು ವಾಕಿಂಗ್ ಹೋಗುತಿದ್ರಿ, ನನ್ನ ಒಳಮನಸ್ಸು ತಳಮಳ ಕೊಂಡಿತ್ತು, ಹಾಗೆ ಓಮ್ಮೆ ನೆನೆದೆ ಅರಿಯದೆ ಅದಳು ಪರಿಚಯ, ಅರಿಯದೆ ಈ ಮನಸಲ್ಲೇ ಉಳಿದು ಬಿಟ್ಟಳು, ಸ್ವಲ್ಪವತ್ತು ನಂತರ ವಾಸ್ತವ ಸ್ಥಿತಿ ಬಂದೆ, ಸಮಯ ೭ ವರೆ ಅದರಿಂದ ಸರಿ ಕಣೋ ನಾಳೆ ಸಿಗೋಣ ಅಂತ ಹೇಳಿ ಹೊರಟಳು, ನಾನು ಕೂಡ ಹೊರಟೆ...
ನಾನು ಮನೆಗೆ ಬಂದು ಕೆಲ್ಸಕೆ ಹೋಗಲು ರೆಡಿ ಆದೇ, ಆಕಡೆ ಇಂದ ಅಮ್ಮ ತಟ್ಟೆಗೆ ಊಟ ಹಾಕಿ ತಂದು ಕೊಟ್ಟರು, ನಾನು ಊಟ ಮುಗಿಸಿ ಟಿಫನ್ ಬಾಕ್ಸ್ ಬ್ಯಾಗ್ ಒಳಗೆ ಇಟ್ಟು, ನನ್ನ ಗಾಡಿಯ ಬಳಿ ಬಂದು ನಿಂತೆ, ಆಕಡೆ ಇಂದ ಪೇಪರ್ ಇಡಿದು ಕೂತು ಕಾಫೀ ಕುಡಿತಿದ್ದ ಅಪ್ಪ ಹುಷಾರಾಗಿ ಹೋಗೋ ಎಂದರು, ನಾನು ಹೂ ಅನ್ನುತಾ ಗಾಡಿ ಹತ್ತಿ ಕೂತೆ ಹೊರಡಲು ಅಮ್ಮ ಅಲ್ಲೇ ಬಾಗಿಲ ಬಳಿ ನಿಂತಿದ್ದರು, ಸರಿ ಅಮ್ಮ ಬರ್ತೀನಿ ಅಂತ ಹೇಳಿ ಹೊರಟೆ.... ನನ್ನ ಜವಾಬ್ದಾರಿ ಕೂಡ ಹೆಚ್ಚು ಇತ್ತು...
ಈಗೆ ದಿನಗಳು ಕಳೆದವು... ಒಂದು ವರ್ಷ ಕಳೆಯಿತು... ಅವತೊಂದಿನ ನನ್ನ ಭಾವನೆಗಳನ್ನು ಅವಳಿಗೆ ಹೇಳಿಬಿದೋಣ ಅಂದು ಕೊಂಡೆ, ಅವತು ಹೀಗೆ ಅಂಗಡಿಗೆ ಹೋಗಿದ್ದಾಗ ಅವಳು ಆಕಸ್ಮಿಕವಾಗಿ ಸಿಕ್ಕಲು, ಆದರೆ ಮಾತನಾಡಲು ಅವಕಾಶ ಇರಲಿಲ್ಲ ಏಕೆಂದರೆ ಅವಳು ಅವಳ ಅಮ್ಮನ ಜೊತೆ ಸ್ಟೋರ್ ಗೆ ಬಂದಿದ್ದಳು , ಹಾಗೆ ಅವಳನೆ ನೋಡಿದೆ ಅವಳು ಕಣ್ಣ ಸನ್ನೆಯೆಲ್ಲೆ ನಾಳೆ ಸಿಗೋಣ ಅಂತ ಹೇಳಿದಳು, ನಾನು ಹಾಗೆ ಸರಿ ಬಾಯ್ ಎಂದು ಕೈ ಸನ್ನೆಯಲ್ಲಿ ಹೇಳಿ ಹೊರಟೆ....
ನಾನು ಮನೆಗೆ ಬಂದೆ, ಹಾಗೆ ಸುಮ್ಮನೆ ಸೋಶಿಯಲ್ ಮೀಡಿಯಾ Instagram ನಲ್ಲಿ ಫೀಡ್ ನೋಡುತಿದ್ದೆ, ಹಾಗೆ ಅವಳ ಫೋಟೋ ಕೂಡ ಬಂದಿತು, ಹಾಗೆ ಫೋಟೋ ನಾ ಲೈಕ್ ಮಾಡಿ ಅವಳ ಪ್ರೊಫೈಲ್ ವೀಕ್ಷಿಸಿದೆ, ಹಾಗ ನನಗೆ ತಿಳಿದು ಬಂದಿತು, ಏನಂದ್ರೆ ಅವಳ ಹುಟ್ಟು ಹಬ್ಬದವಾಗಿತು, ಅದಕೆ ಅನ್ಸುತ್ತೆ ಅವಳು ಬಲೆ ಏನ್ನಾದ್ರು ತೊಗೊಳೊಕೆ ಬಂದಿದ್ರು ಅಂತ ಅನ್ಸುತ್ತೆ, ನಾನು ಒ ಅನ್ನುತಾ ಹಾಗೆ ಏನ್ ಗಿಫ್ಟ್ ಕೊಡೋಣ ಅಂತ ಯೋಚಿಸುತ್ತಾ ಕುಳಿತೆ, ಹಾಗ ಸಮಯ ಸಂಜೆ ಎಂಟು ವರೆ ಆಗಿತ್ತು, ನಾನು ಬಿಡು ಹೇಗಿದ್ರು ನಾಳೆ ಸಂಜೆ ಸಿಗುತಳಲ್ಲ ನಾಳೆ ಹಾಗೆ ಗಿಫ್ಟ್ ತೋಗೊಳೋಣ ಅಂತ ಸುಮ್ಮನಾದೆ...
ಹಾಗೆ ಮಧ್ಯ ರಾತ್ರಿ ಅವಳಿಗೆ ಹುಟ್ಟು ಹಬ್ಬದ ಶುಭಾಶಯಗಳು, ಸದಾ ಖುಷಿಯಿಂದ ಇರು ಎಂದು ಮೆಸೇಜ್ ಮಾಡಿ ಮಲಗಿದೆ, ಎಂದಿನಂತೆ ಪಾರ್ಕ್ ಗೆ ಹೋಗಲು ಎದ್ದೆ ಫ್ರೆಶ್ ಅಪ್ ಹಾಗಿ ಹಾಗೆ ಮೊಬೈಲ್ ನೋಡಿದೆ ಅವಳ ಮೆಸೇಜ್ ಬಂದಿತ್ತು, ತುಂಬಾ ಧನ್ಯವಾದ, ನಾಳೆ ಬೆಳಗೆ ಎಂಟು ಗಂಟೆಗೆ ಶಿವ ಟೆಂಪಲ್ ಗೆ ಬಾ ಸಿಗೋಣ ಅಂತ ಮೆಸೇಜ್ ಮಾಡಿದ್ಲು, ಸರಿ ಬರ್ತೀನಿ ಅಂತ ಮೆಸೇಜ್ ಮಾಡಿ ಪಾರ್ಕ್ ಗೆ ಹೋಗಿ ಬೇಗನೆ ಮನೆಗೆ ಬಂದೆ, ಸ್ಥಾನ ಮಾಡಿ ಫಾರ್ಮಲ್ ಬ್ಲಾಕ್ ಅಂಡ್ ವೈಟ್ ಅಲ್ಲಿ ರೆಡಿ ಆದೆ, ಆಕಡೆ ಇಂದ ಅಮ್ಮ ಕಾಫೀ ತರ್ಲ ಎಂದು ಹೇಳಿದರು ನಾನು ಇಲ್ಲ ಬೇಡ ಅಮ್ಮ ಎಂದು ಹೇಳಿ ದೇವಸ್ಥಾನ ಗೆ ಹೋಗಿ ಬರ್ತೀನಿ ಎಂದೇ... ಅಮ್ಮ ಯಾವ್ ದೇವಸ್ಥಾನ ಅಂದ್ರು, ನಾನು ಇಲ್ಲೇ ಶಿವ ದೇವಸ್ಥಾನ ಎಂದು ಹೇಳಿ ಹೊರಟೆ....
ಅಲ್ಲೇ ದೇವಸ್ಥಾನ ಹತ್ತಿರ ಗಾಡಿ ನಿಲ್ಲಿಸಿ ಇಳಿದು ಅಲ್ಲೇ ಸ್ಲೀಪರ್ ಬಿಟ್ಟು ದೇವಸ್ಥಾನ ಬಾಗಿಲ ಬಳಿ ಬಂದೆ, ಹಾಗೆ ದೇವರಿಗೆ ಕೈ ಮುಗಿದು ಆಕಡೆ ತಿರುಗಿದೆ, ಅವಳು ಅಲ್ಲೇ ಇದ್ದ ಹಳ್ಳಿ ಮರವನ್ನು ಸುತ್ತುತಿದ್ದಳು, ಅವಳನ್ನೇ ನೋಡುತ್ತ ನಿಂತೆ ಅವಳು ನನ್ನೆ ನೋಡಿ ಇರು ಬರ್ತೀನಿ ಅಂತ ಹೇಳಿದಳು, ನಾನು ಸರಿ ಬಾ ಎಂದು ಹೇಳಿ ನಿಂತೆ, ನಂತರ ಬಂದಳು ಇಬ್ಬರು ದೇವಸ್ಥಾನ ಗುಡಿ ಒಳಗೆ ಹೋದೆವು, ಕುಟುಂಬ ಹೆಸರಲ್ಲಿ ದೇವರಿಗೆ ಅರ್ಚನೆ ಪೂಜೆ ಮಾಡಿಸಿ ಇಬ್ಬರು ಹೊರಗೆ ಬಂದೆವು, ಅವಳು ಲಂಗದವಣಿ ಬಟ್ಟೆ ಹಾಕಿಕೊಂಡಿದ್ದಳು, ಹಾಗೆ ಕೈಗೆ ಬಲೆ ತೊಟ್ಟಿದ್ದಳು, ಅವಳನ್ನೇ ನೋಡುತ್ತ ಅಕ್ಷಣ ನನ್ನೆ ಮರೆತೇ, ಅವಳು ಹೇ ಏನಾಯ್ತು ಅಂದಳು ನಾನು ಏನಿಲ್ಲ ನೀನು ತುಂಬಾ ಚನಾಗಿ ಕಾಣಿಸಿತಿದಿಯ ಎಂದೇ... ಅವಳು ಹಾಗೆ ನಕ್ಕು ನೀನು ಅಷ್ಟೆ ಎಂದು ಹೇಳಿದಳು... ಹಾಗೆ ಅವಳು ಇವತ್ತು ಸಂಜೆ ಸಿಗು ಎಂದು ಹೇಳಿದಳು ನಾನು ಸರಿ ಸಿಗ್ತಿನಿ ಎಂದೇ... ಅವಳು ಏನೋ ಕುಂಕುಮ ಇಟ್ಟೆ ಇಲ್ವಲೋ ಎಂದು ಹೇಳಿ ಅವಳೇ, ಅವಳ ಹತ್ತಿರ ಅರ್ಚನೆ ಮಾಡಿಸಿದ್ದ ಕುಂಕುಮ ವನ್ನು ಎತ್ತಿ ನನ್ನ ಹಣೆಗೆ ಕುಂಕುಮ ಇಟ್ಟಳು, ನನ್ನೇನಾ ಅ ಕ್ಷಣ ಕಳೆದೋದೆ... ಹಾಗೆ ನಂತರ ನಾನೇ ಬಾ, ನಿನ್ನ ಮನೆ ಹತ್ತಿರ ಬಿಟ್ಟು ಹೋಗ್ತೀನಿ ಅಂದೆ, ಅವಳು ಕೂಡ ಸರಿ ಎಂದು ನನ್ನ ಗಾಡಿ ಹಿಂದೆ ಕೂತಲು ಅಲ್ಲಿಂದ ಮನೆ ಕಡೆ ಹೊರಟೆ... ಅವಳ ರೋಡ್ ಕೊನೆಯಲ್ಲಿ ಇಲ್ಲಿಸಿ ಒನ್ಸ್ ಅಗೆನ್ ಹುಟ್ಟು ಹಬ್ಬದ ಶುಭಾಶಯಗಳು ಎಂದೇ , ಅವಳು ಧನ್ಯವಾದ ಎಂದು ಹೇಳಿ ಸರಿ ಬರ್ತೀನಿ ಅಂತ ಹೇಳಿ ಹೊರಟಳು... ನಾನು ಸರಿ ಸಿಗೋಣ ಅಂತ ಹೇಳಿ ಹೊರಟೆ...
ಹಾಗೆ ಮನಸಿಗೆ ಅನಿಸಿತು ಇವತು ನನ್ನ ಮನದ ಭಾವನೆಗಳನ್ನು ಹೇಳಿಬಿಡೋಣ ಅಂದು ಕೊಂಡು, ಒಂದು ರೆಸ್ಟೋರೆಂಟ್ ಅಲ್ಲಿ ಅವಳ ಹುಟ್ಟು ಹಬ್ಬಕ್ಕೆ ಡೇಕೊರೆಸನ್ ಮಾಡಿಸಿ ಸುತ್ತಲೂ ಹೂವಿನಿಂದ ಅಲಂಕರಿಸಿ ಹಾಗೂ ದೀಪದಿಂದ ಬೆಳಕು ತುಂಬಿ ಸುಂದರವಾಗಿ ಅಲಂಕರಿಸಲು ನನ್ನ ಸ್ನೇಹಿತನಿಗೆ ಹೇಳಿದೆ...
ಮನೆಗೆ ಬಂದು ಕೆಲ್ಸಕ್ಕೆ ಹೊರಟೆ ಹಾಗ ಸಮಯ ಬೆಳಕೆ ಒಂಬತ್ತು ಕಾಲು ಆಗಿತ್ತು... ಹಾಗೆ ಕೆಲ್ಸ ಮುಗಿಸಿ ಇವೇನಿಂಗ್ ಬೇಗ ಬಂದೆ... ಹಾಗ ಸಮಯ ಆರು ವರೆ ಆಗಿತ್ತು... ಹಾಗೆ ನಾನು ನನ್ನ ಬೈಕ್ ಹತ್ತಿ ಹೊರಟೆ ಗಿಫ್ಟ್ ಅಂಗಡಿಗೆ, ಹಾಗೆ ನಾನು ಸಾಮಾನ್ಯವಾಗಿ ಎಲ್ಲೂರು ಡಾಲ್ ಇಷ್ಟ ಪಡುತ್ತಾರೆ ಎಂದು ತೋಗೊಂಡೇ, ಹಾಗೆ ಒಂದೆರಡು ಡೈರಿ ಮಿಲ್ಕ್ ತೋಕೊಂಡು ಹಾಗೆ ಹೂವಿನ ಬೊಕ್ಕೆ ತೋಗೊಂಡು, ನನ್ನ ಸ್ನೇಹಿತನಿಗೆ ಕರೆ ಮಾಡಿದೆ , ಅವನು, ನೀ ಹೇಳಿದಂತೆ ಡೇಕೊರೆಸನ್ ಮಾಡಿಸಿದಿನಿ ಅಂದ, ನಾನು ಈಗ ಬರ್ತಾ ಇದೀನಿ ಅದುಕೆ ಫೋನ್ ಮಾಡ್ದೆ ಅಂದೆ, ಅವನು ಸರಿ ಬಾ ಎಂದ, ನಾನು ಅಲ್ಲಿಗೆ ಹೊರಟೇ... ನಾನು ತಂದ ಎಲ್ಲ ಅಲ್ಲೇ ಇಕ್ಕಿ ... ಅಲಕರಿಸಿದ್ದನು ನೋಡಿದೆ... ನಾನು ಹೇಳಿದಂತೆ ಮಾಡಿಸಿದ್ದ....
ನಾನು ಅವಳಿಗೆ ಕರೆ ಮಾಡಿದೆ, ಅವಳು ಪಿಕ್ ಮಾಡಿದ್ಲು ನಂತರ ಹಲೋ ಅಂದು ಏನ್ ಹೇಳು ಅಂದಳು , ನಾನು ನಿಮ್ಮ ಮನೆ ಹತ್ತಿರ ಬರ್ತಾ ಇದ್ದೆ ಆದುಕೆ ಹೊರಗಡೆ ಸಿಗ್ತಿಯ ಅಂತ ಕೇಳಿದೆ, ಅವಳು ಕೂಡ ಸರಿ ಬಾ ಎಂದು ಹೇಳಿದಳು, ಹಾಗ ಸಮಯ ಸಂಜೆ ಎಂಟು ಗಂಟೆ ಆಗಿತ್ತು, ನಾನು ಅವಳ ಮನೆ ಹತ್ತಿರ ಹೋದೆ ಅವಳು ಕೂಡ ಬಂದಳು, ನಂತರ ಅವಳೇ ಹೇಳಿದಳು ಲೋ ೯ ಗಂಟೆಗೆ ಕೇಕ್ ಕಟ್ ಇದೆ ನನ್ ಫ್ರೆಂಡ್ಸ್ ಎಲ್ಲಾ ಬರ್ತಾರೆ ಬೇಗ ಹೋಗ್ಬೇಕು ಮನೆಗೆ ಅಂದಳು, ಸರಿ ಬಾ ಅಂದು ಅವಳನ್ನು ನನ್ನ ಗಾಡಿ ಹತ್ತಿ ರೆಸ್ಟೋರೆಂಟ್ ಕಡೆಗೆ ಹೊರಟೆ... ಅವಳಿಗೂ ತಿಳಿದಿಲ್ಲ, ಅವಳೇ ಎಲ್ಲಿಗೆ ಕರೆದುಕೊಂದು ಹೋಗ್ತುದಿಯ ಅಂದ್ಲು, ಇಲ್ಲೇ ಅಂದು ಹೇಳಿ ರೆಸ್ಟೋರೆಂಟ್ ಹತ್ತಿರ ಇರುವಾಗ ಅವಳಿಗೆ ಹೇಳಿದೆ, ನಾನೇ ಬಟ್ಟೆ ಕೊಟ್ಟು ಕಣ್ಣಿಗೆ ಕಟ್ಟಿಕೊ ಅಂದೆ, ಅವಳು ಯಾಕೋ ಅಂದ್ಲು, ನಾನು ನೀನು ಕಟ್ಕೊ ಹೇಳ್ತೀನಿ ಅಂದೆ, ಅವಳು ಕಣ್ಣಿಗೆ ಬಟ್ಟೆ ಕಟ್ಟಿದಳು, ನನ್ನ ಗಡಿಯನ್ನ ಅಲ್ಲೇ ರೆಸ್ಟೋರೆಂಟ್ ಬಳಿ ನಿಲ್ಲಿಸಿ ಅವಳ ಕೈ ಹಿಡಿದು ಡೇಕೊರೇಶನ್ ಮಾಡಿಸಿದ್ದ ಕಡೆಗೆ ಕರೆಕೊಂಡು ಹೊರಟೆ, ನಂತರ ಅವಳ ಕಣ್ಣಿಗೆ ಬಟ್ಟೆ ಕಟ್ಟಿದ್ದನ್ನು ತೆಗೆದೆ....
ಅವಳು ಒಂದುಕ್ಷಣ ಆಚಾರ್ಯವಾಗಿ ಗುಲಾಬಿಗಳಿಂದ ಅಲಂಕರಿಸಿದ್ದನ್ನು ನೋಡುತ ಮೌನವಾಗಿ ಇದ್ದಳು, ನಾನು ಬಾ ಕೇಕ್ ಕಟ್ ಮಾಡು ಎಂದು ಹೇಳಿದೆ , ಅವಳು ಸಹ ಕೇಕ್ ಕಟ್ ಮಾಡಿ ಒಂದು ತುತ್ತು ತಿನ್ನಿಸಿದಳು ನಾನು ಕೂಡ ತಿನ್ನಿಸಿದೆ, ನಂತರ ಧೈರ್ಯ ಮಾಡಿ ಹೂವಿನ ಬೊಕ್ಕೆ ಎತ್ತಿಕೊಂಡು , ನನ್ನ ಮನದ ಭಾವನೆಗಳನ್ನು ವ್ಯಕ್ತಪಡಿಸಿದೆ, ನೀನು ಅಂದ್ರೆ ನನಗೆ ಇಷ್ಟ ನಾನು ಅಂದ್ರೆ ನಿಂಗೆ ಇಷ್ಟನಾ ಅಂದೆ, ಅವಳ ಕಣ್ಣುಗಳು ಮಾತನಾಡಲು ಆರಂಭಿಸಿತ್ತು, ಅವಳು ನನ್ನ ಕೈಯಲ್ಲಿ ಇದ್ದ ಬೊಕ್ಕೆಯನ್ನು ತೊಗೊಂಡು, ನನ್ನೆ ಬಿಗಿ ದಪ್ಪಿ ನೀನ್ ಅಂದ್ರೆ ನಂಗೂ ಇಷ್ಟ ಅಂತ ಹೇಳಿದಳು, ಅವಳ ಅಪ್ಪುಗೆಯ ಕ್ಷಣ ಪದಗಳಲಿ ವ್ಯಕ್ತಪಡಿಸೋಕೇ ಆಗಲ್ಲ... ನಾನು ತಂದಿದ್ದ ಡಾಲ್ ಗೊಂಬೆ ಹಾಗೂ ಡೈರಿ ಮಿಲ್ಕ್ ಕೊಟ್ಟೆ ತುಂಬಾ ಖುಷಿ ಪಟ್ಟಳು... ಹಾಗ ಸಮಯ ಎಂಟು ವರೆ ಆಗಿತ್ತು...
ನಂತರ ಅವಳನ್ನು ಅವರ ಮನೆ ಕಡೆಗೆ ಹೊರಟೆ, ಅವಳ ಮನೆ ಹತ್ತಿರ ರೋಡ್ ಬಳಿ ನಿಲ್ಲಿಸಿ , ಸರಿ ಮತ್ತೆ ಅಂದೆ, ಅವಳು ೯ ಗಂಟೆಗೆ ನೀನು ಬಾ ಮನೆಗೆ ಅಂದ್ಲು, ನಾನು ಇಲ್ಲ ಪರ್ವಾಗಿಲ್ಲ ಅಂದೆ, ಅವಳು ಇಲ್ಲ ನೀನು ಬರ್ತೀಯ ಅಷ್ಟೆ ಅಂದ್ಲು, ಸರಿ ಆಯ್ತು ನೋಡ್ತೀನಿ ಅಂದೆ... ಅವಳು ಮನೆ ಕಡೆ ಹೊರಟಳು... ಆದರೆ ಅವಳ ಮನೆಗೆ ಹೋಗೋಕಾಗಿಲ್ಲ , ಸಮಯ ಹತ್ತು ವರೆ ಆಗಿತ್ತು ಅವಳು ಮೆಸೇಜ್ ಮಾಡಿಲ್ಲು , ಯಾಕೋ ಬಂದಿಲ್ಲ ಅಂದ್ಲು, ನಾನು ಹೇಳಿದೆ ಇಲ್ಲ ಎಲ್ಲ ನಿಮ್ಮ ಸ್ನೇಹಿತರು ಇರ್ತರಲ್ಲ ನಂಗೆ ಮುಜುಗರ ಆಯ್ತು ಅದುಕೇ ಬಂದಿಲ್ಲ ಅಂದೆ, ಸರಿ ಆಯ್ತು ಬೀಡು ಅಂದ್ಲು , ನಾನು ಮತ್ತೆ ಅಂದೆ , ಹೀಗೆ ಒಂದಿಷ್ಟು ಒಲವಿನ ಸಂದೇಶಗಳು ಭಾಸವಾಗಿತ್ತು....
ಈಗೆ ವರ್ಷಗಳು ಕಳೆಯಿತು ನಾನು ಕೆಲ್ಸಕ್ಕೆ ಸೇರಿದ್ದ ಕಡೆಯೇ ಅವಳಿಗೆ ರೆಫರೆನ್ಸ್ ಮಾಡಿ ಅವಳು ಕೂಡ ಕೆಲ್ಸಕ್ಕೆ ಸೇರಿದಳು... ಅಂದಿನಿಂದ ಈ ಪ್ರೀತಿ ಹೆಚ್ಚಾಯಿತು ಹಾಗೂ ಅವಳ ಜೊತೆ ಮತಷ್ಟು ಸಮಯ ಕಳೆಯಲು ಸಮಯ ಸಿಕ್ತು... ಈಗೆ ಒಂದು ದಿನ ಅವಳ ಮನೆಯಲ್ಲಿ ಮದುವೆಯ ವಿಷಯ ಪ್ರಸ್ತಾಪವಾಗಿತು, ಹಾಗ ಅವಳಿಗೆ ೨೩ ವರ್ಷ, ನಾನು ಅವಳಿಕಿಂತ ಎರಡು ವರ್ಷ ಸೀನಿಯರ್ ಅಷ್ಟೆ, ಅವಳು ಪ್ರೀತಿಯ ವಿಷಯ ಹೇಳಲಾಗದೆ ಸುಮ್ಮನಾದಳು... ಅವಳಿಗೂ ಅರಿವಾಗಿತ್ತು ಏನಾದ್ರೂ ಮಾಡಿ ಅವಳ ಪ್ರೀತಿ ತಂದೆ ತಾಯಿಗೆ ಹೇಳಿ ಬಿಡೋಣ ಅಂತ ಚಿಂತಿಸಿದ್ದಳು...
- ಮುಂದುವರೆಯುವುದು
Comments
Post a Comment