ಒಲವಿನ ಭಾವನೆ!

ನಿನ್ನ ಕಣ್ಣಗಳ ನೋಡಿ ನಾಚುತಿದೆ ಮನಸು ||
ಒಲವಿಗೆ ಒಲವಾಗಿದೆ ತಪ್ಪಿದ್ದಲ್ಲಿ ನನ್ನನ್ನು ಕ್ಷೇಮಿಸು...

ನನ್ನೆದೆಯಲ್ಲಿ ಮೂಡಿದೆ ಅದೊಂದು ಕಾವ್ಯ ||
ನೀ ನನ್ನ ಮನವ ಸೇರುವಗಳಿಗೆ, ಆಗುವುದು ಮನಸು ಭವ್ಯ...

ಈ ನನ್ನ ಒಲವಿನ ಕವಿತೆಗೆ, ಸಾಲು ನೀನಾಗಿರುವಾಗ ||
ನಿನ್ನ ಮೇಲೆ ಇರುವ ಭಾವನೆಯ ವರ್ಣಿಸಿ, ಪದಗಳು ನಾಚಿದೆ ಈಗ...

ದೂರದಲ್ಲಿ ಇದ್ದರು ಸನಿಹವೇ ನೀನು ||
ನಿನ್ನ ನೋಡೋ ಕಾತುರದಲ್ಲಿ, ಹುಚ್ಚು ಪ್ರೀತಿ ಹೆಚ್ಚಾಗಿದೆ ನನಗಿನ್ನು...

- ಪ್ರದೀಪ್. ಎಸ್ ( - ಪ್ರದೀ...)

Comments

Popular Posts