ಓಲವಿನ ಭಾವನೆ!

ಬರೆಯಲೇ ಸಾಲು ಪದಗಳಾಗಿ,
ವರ್ಣಿಸಲೆ ನಾನು ನಿನ್ನ ಕವಿಯಾಗಿ,
ನನ್ನೆಲ್ಲಾ ಯೋಚನೆ ನೀನಾಗಿ,
ಬರೆದಿಯೆನು ಕವಿತೆಯ ಸಾಲು ಸಾಲಾಗಿ!

ನಿನ್ನ ಅಂದವಾದ ಮೊಗವನ್ನ ಹೇಗೆ ವರ್ಣಿಸಲಿ,
ನಿನ್ನೆ ನೋಡುತ ಸೋಲುವುದು ಮನಸು ಪ್ರತಿಸಲಿ,
ನೀನಿರದ ಬದುಕು ಹೇಗೆ ನಾ ಕಲ್ಪಿಸಲಿ,
ಎಂದೆಂದು ನಾ ಇರುವೆ ನಿನ್ನ ಜೊತೆ ಜೊತೆಯಲಿ!

ಮೌನದಲ್ಲೇ ಅಡಗಿರುವೆ ಮಾತಿನ ಸ್ಪಂದನೆ,
ಮನಸು ಮನಸುಗಳ ನಡುವೆ ನಡೆದಿದೆ ಸಂಭಾಷಣೆ,
ಎಂದು ಕೊನೆಯಾಗದು ಈ ಪ್ರೀತಿಯ ಸಂಭಾವನೆ,
ಈ ಹೃದಯದಲ್ಲಿ ತುಂಬಿರುವುದು ನಿನ್ನ ಸಂಪ್ರೀತಿನೇ!

- ಪ್ರದೀಪ್. ಎಸ್ ( ಪ್ರದೀ...)

Comments

Popular Posts