ಮೌನ..!

• ಮೌನ..! ಭಾವದ ಭಾವನೆ!..
.
ಮೌನದಿ ಮನಸು,
ಕಾಣುತಿದೆ ಪುಟ್ಟ ಕನಸು,
ಹೃದಯದಿ ಮಾಡಿದೆ ಕಲ್ಪನೆ,
ಮೌನದಲ್ಲೇ ತಿಳಿಸುವ ಮನಸಿನ ಭಾವನೆ..!
.
ಮೌನ ಒಂದು ಉತ್ತರ,
ಪ್ರಶ್ನೆ ಇಲ್ಲದೆ ಯೋಚಿಸೋ ಮನಸು,
ಹೇಳದ ಹೇಳಿದ ಹಾಗೆ ಮೂಡುವುದು,
ಮೌನದಲ್ಲೇ ತಿಳಿಸುವ ಭಾವನೆ,
ಸಣ್ಣ ಪುಟ್ಟ ಕಲ್ಪನೆ, ನೂರಾರು ಯೋಚನೆ,
ಆದರು ಮೌನದಲ್ಲೇ ಉಳಿಯುವ ಅಲವರು ಕಲ್ಪನೆ..!
ಆದರು ಮೌನದಲ್ಲೇ ಉಳಿಯುವುದು ಅದೊಂದು ಭಾವನೆ..!
.
ಮೌನಕೇ ಭಾಷೆ ಇಲ್ಲ,
ಭಾವನೆಗಳೇ ಅದರ ಭಾವನೆ..!
ಮೌನದ ಮನಸಿಗೆ ಕೊನೆಯಲ್ಲಿ,
ಪ್ರತಿ ಮೌನಕ್ಕೆ ಸ್ಪಂದಿಸೋ ಹೃದಯವೇ ಕೊನೆ ಇಲ್ಲಿ..!
.
ಅಳವರು ಭಾವನೆಗಳನ್ನು ತಿಳಿಸುವುದೆ ಮೌನ..!
....
- ಪ್ರದೀಪ್. ಎಸ್ ( ಪ್ರದೀ..)

Comments

Popular Posts