ಅಮ್ಮ..!

• ಅಮ್ಮ..! ~ ಕೊನೆಯಾಗದ ಪ್ರೀತಿ..!
.
ಕೊನೆಯಾಗದು ತಾಯಿಯ ಪ್ರೀತಿ,
ಅವಳು ಕೈ ತುತ್ತು ನೀಡುತ್ತ ಬೆಳೆಸಿದಳು,
ಪ್ರೀತಿ ವಾತ್ಸಲ್ಯವ ಬೇಳೆಸಿದವಳು, ತನ್ನ ಕಣ್ಣಿನಂತೆ ಸದಾ ನಮ್ಮ ರಕ್ಷಿಸಿದಳು, ಅವಳ ಋಣ ತೀರಿಸೋಕೆ ನನ್ನ ಈ ಜನ್ಮ ಸಾಲದು..!
.
ನವ ತಿಂಗಳ ವತ್ತು ನಮ್ಮ ಸಲೆದಿಹಲು,
ಈ ಕರುಳಿನ ಸಂಬಂಧವ ಬೆಳೆಸಿದವಳು,
ತನ್ನ ಎಲ್ಲ ನೋವುಗಳನ್ನು ಪುಟ್ಟ ನಮ್ಮ ನಗುವ ಕಂಡು ಮರೆಯುವಳು,
ತಾನು ನಗುತಾ ಎಲ್ಲ ಖುಷಿಯನ್ನು ಅಂಚುತ ಹೊರತಿಹಲು..!
.
ನಮ್ಮ ಜಗವು ಅಮ್ಮನೇ,
ಎಂದು ಕೊನೆಯಾಗದ ಪ್ರೀತಿ ಅಮ್ಮನೇ,
ಈ ನನ್ನ ಜನುಮ ಇವಳ ಪಾದಕೆ ಅರ್ಪಣೆ,
ಕಣ್ಣಿಗೆ ಕಾಣದ ದೇವರು ಅಮ್ಮನೇ..!
....
- ಪ್ರದೀಪ್. ಎಸ್ ( ಪ್ರದೀ...)

Comments

Popular Posts