ಭಾವದ ಭಾವನೆಗಳು❤️ ( ಆದೇ ಪ್ರೀತಿ... ಬೇರೆ ರೀತಿ...)
ತುಂಟಾಟದ ಮನಸು ,
ಅರಿತಿಲ್ಲ ವಯಸು ,
ನೂರಾರು ಕನಸು ,
ಭಾವನೆಗಳೇ ನೀ ಸ್ಪಂದಿಸು...
ನೆನಪಿಸಿದೆ, ಆದ ನಿನ್ನ ಪರಿಚಯವ ,
ಉಸಿರು ಉಸಿರು ಬೆರೆತುಹೋದ ಕ್ಷಣವ ,
ಕಣ್ಣಲಿ ಕಣ್ಣಿಟ್ಟು ಪ್ರೀತಿಸಿದ ಮನವ ,
ನಿನ್ನ ಮೊದಲ ನೋಟಕ್ಕೆ ನಾ ಹಾಗಿಬಿಟ್ಟೆ ನಿನ್ನವ...
ಕಳೆದು ಹೋಗಿದೆ ಈ ಗಳಿಗೆ ,
ಮತ್ತೆ ಬರುವೆಯಾ ಮನಸಿನ ಒಳಗೆ ,
ಹೃದಯವು ಬಯಸಿದೆ ನಿನ್ನ ಸ್ಪರ್ಶಕೆ ,
ಜಗವೆಲ್ಲ ಮರೆಯಾಯಿತು ಈ ಕಣ್ಣಿಗೆ...
ನಿನ್ನ ಅಂದಕೆ ಸೋತು ಹೋದ ಹೃದಯ ,
ನಿನ್ನೆ ನೆನಪಿಸುತಿದೆ ಪ್ರತಿ ಸಮಯ ,
ನಿನ್ನೊಡನೆ ಇದ್ದರೆ ಜಗತ್ತೇ ವಿಸ್ಮಯ ,
ಓಮ್ಮೆ ಮನಸಾರೆ ಒಪ್ಪಿಬೀಡು ನನ್ನ ಪ್ರೀತಿಯ...❤️
( - ಪ್ರದೀ..❤️ )
Comments
Post a Comment